ಎಡ್ವರ್ಡ್ ಮೈಕೆಲ್ ಬೇರ್ ಗ್ರಿಲ್ಸ್ (/ˈɡrɪlz/; ಜನನ ೭ ಜೂನ್ ೧೯೭೪) ಒಬ್ಬ ಬ್ರಿಟಿಷ್ ಎ‍ಸ್‌ಎ‌ಎಸ್ ಸೈನಿಕ, ದೂರದರ್ಶನ ನಿರೂಪಕ. ಇವರು ದೂರದರ್ಶನ ಸರಣಿ ಮ್ಯಾನ್ ವರ್ಸಸ್ ವೈಲ್ಡ್ (೨೦೦೬-೨೦೧೧)ರಲ್ಲಿ ನಿರೂಪಕರಾಗಿದ್ದರು. ಜುಲೈ ೨೦೦೯ ರಲ್ಲಿ ಗ್ರಿಲ್ಸ್ ತನ್ನ ೩೫ ನೇ ವಯಸ್ಸಿನಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ಸಾಗರೋತ್ತರ ಪ್ರಾಂತ್ಯಗಳ ಸ್ಕೌಟ್ ಅಸೋಸಿಯೇಷನ್‌ನ ಕಿರಿಯ ಚೀಫ್ ಸ್ಕೌಟ್ ಆಗಿ ನೇಮಕಗೊಂಡರು. == ವೈಯಕ್ತಿಕ ಜೀವನ == ಗ್ರಿಲ್ಸ್ ಅವರು ೭ ಜೂನ್ ೧೯೭೪ ರಂದು ಉತ್ತರ ಐರ್ಲೆಂಡ್‌ನ ಡೊನಾಘಡೆಯಲ್ಲಿ ಜನಿಸಿದರು. ಅವರ ಅಜ್ಜ ನೆವಿಲ್ಲೆ ಫೋರ್ಡ್ ಮತ್ತು ಮುತ್ತಜ್ಜ ವಿಲಿಯಂ ಅಗಸ್ಟಸ್ ಫೋರ್ಡ್ ಇಬ್ಬರೂ ಪ್ರಥಮ ದರ್ಜೆಯ ಕ್ರಿಕೆಟಿಗರಾಗಿದ್ದರು. ಅವರ ತಂದೆ ಕನ್ಸರ್ವೇಟಿವ್ ರಾಜಕಾರಣಿ ಸರ್ ಮೈಕೆಲ್ ಗ್ರಿಲ್ಸ್ ಮತ್ತು ತಾಯಿ ಸಾರಾ "ಸ್ಯಾಲಿ" (ನೀ ಫೋರ್ಡ್). ಗ್ರಿಲ್ಸ್‌ ಅವರ ಅಕ್ಕ ಲಾರಾ ಫಾಸೆಟ್. ಗ್ರಿಲ್ಸ್‌ ಅವರು ಮಗುವಾಗಿದ್ದಾಗ ಅವರ ಅಕ್ಕ ಅವರನ್ನು'ಬೇರ್' ಎಂದು ಕರೆಯುತ್ತಿದ್ದರು. ಅವರು ಡೊನಾಘಡೀಯಲ್ಲಿ ನಾಲ್ಕನೇ ವಯಸ್ಸಿನವರೆಗೆ ವಾಸಿಸುತ್ತಿದ್ದರು. ನಂತರ ಅವರ ಕುಟುಂಬವು ಐಲ್ ಆಫ್ ವೈಟ್‌ನಲ್ಲಿ ರುವ ಬೆಂಬ್ರಿಡ್ಜ್‌ಗೆ ಸ್ಥಳಾಂತರಗೊಂಡರು. ಗ್ರಿಲ್ಸ್ ಅವರು ಶೋಟೊಕಾನ್ ಕರಾಟೆಯಲ್ಲಿ ಎರಡನೇ ಡಾನ್ ಬ್ಲ್ಯಾಕ್ ಬೆಲ್ಟ್ ಗಳಿಸಿದರು. ಗ್ರಿಲ್ಸ್ ಅವರು ೨೦೦೦ ರಲ್ಲಿ ಶಾರಾ ಕ್ಯಾನಿಂಗ್ಸ್ ನೈಟ್ ಅವರನ್ನು ವಿವಾಹವಾದರು. ಅವರಿಬ್ಬರಿಗೆ ಮೂವರು ಗಂಡು ಮಕ್ಕಳು ಜನಿಸಿದರು. == ಶಿಕ್ಷಣ == ಗ್ರಿಲ್ಸ್ ಅವರು ಈಟನ್ ಹೌಸ್, ಲುಡ್‌ಗ್ರೋವ್ ಸ್ಕೂಲ್ ಮತ್ತು ಎಟನ್ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದರು. ಅವರು ವೆಸ್ಟ್ ಆಫ್ ಇಂಗ್ಲೆಂಡ್, ಬ್ರಿಸ್ಟಲ್ ಮತ್ತು ಬಿರ್ಕ್‌ಬೆಕ್ ಕಾಲೇಜಿನಲ್ಲಿ ಸ್ಪ್ಯಾನಿಷ್ ಮತ್ತು ಜರ್ಮನ್ ಭಾಷೆಯನ್ನು ಅಧ್ಯಯನ ಮಾಡಿದರು. ಅವರು ಪದವಿಯೊಂದಿಗೆ ೨:೨ ಸ್ನಾತಕೋತ್ತರ ಪದವಿ ಪಡೆದರು. == ಸೇನಾ ಸೇವೆ == ೧೯೯೭ ರಿಂದ ಅವರು ೨೧ ಎಸ್‌ಎ‌ಎಸ್ ನೊಂದಿಗೆ ಪ್ರಾದೇಶಿಕ ಸೈನ್ಯದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದರು. ೨೦೦೪ ರಲ್ಲಿ ಗ್ರಿಲ್ಸ್‌ ಅವರಿಗೆ ರಾಯಲ್ ನೇವಲ್ ರಿಸರ್ವ್‌ನಲ್ಲಿ ಲೆಫ್ಟಿನೆಂಟ್ ಕಮಾಂಡರ್ ಗೌರವ ಶ್ರೇಣಿಯನ್ನು ನೀಡಲಾಯಿತು. ನಂತರ ೨೦೧೩ ರಲ್ಲಿ ಅವರು ರಾಯಲ್ ಮೆರೀನ್ಸ್ ರಿಸರ್ವ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯನ್ನು ಪಡೆದರು. ಜೂನ್ ೨೦೨೧ ರಲ್ಲಿ ಗೌರವ ಕರ್ನಲ್ ಆಗಿ ಬಡ್ತಿ ಪಡೆದರು. == ದಂಡಯಾತ್ರೆಗಳು == === ಎವರೆಸ್ಟ್ === ೧೬ ಮೇ ೧೯೯೮ ರಂದು, ಗ್ರಿಲ್ಸ್ ನೇಪಾಳದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದರು. ೧೯೯೭ ರಲ್ಲಿ ಗ್ರಿಲ್ಸ್ ಅವರು ಅಮಾ ಡಬ್ಲಾಮ್ ಅನ್ನು ಏರಿದ ಅತ್ಯಂತ ಕಿರಿಯ ಬ್ರಿಟನ್ ವ್ಯಕ್ತಿಯಾಗಿದ್ದರು. === ಸುದೀರ್ಘ ಒಳಾಂಗಣ ಫ್ರೀಫಾಲ್ === ೨೦೦೮ ರಲ್ಲಿ ಗ್ರಿಲ್ಸ್ ಅವರು ಅಲ್ ಹೊಡ್ಗ್ಸನ್ ಮತ್ತು ಸ್ಕಾಟ್ಸ್‌ಮನ್ ಫ್ರೆಡ್ಡಿ ಮ್ಯಾಕ್‌ಡೊನಾಲ್ಡ್ ಜೊತೆಗೆ ಸುದೀರ್ಘ ನಿರಂತರ ಒಳಾಂಗಣ ಫ್ರೀಫಾಲ್‌ಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. === ವಾಯುವ್ಯ ಮಾರ್ಗದ ದಂಡಯಾತ್ರೆ === ಸೆಪ್ಟೆಂಬರ್ ೨೦೧೦ ರಲ್ಲಿ, ಗ್ರಿಲ್ಸ್ ಐವರ ತಂಡವನ್ನು ನೇತೃತ್ವ ವಹಿಸಿ ಐಸ್ ಬ್ರೇಕಿಂಗ್ ರಿಜಿಡ್-ಇನ್ಫ್ಲೇಟಬಲ್ ಬೋಟ್ (ಆರ್‌ಐ‌ಬಿ) ಅನ್ನು ೫,೭೦೦ ನಾಟಿಕಲ್ ಮೈಲುಗಳಷ್ಟು (೦,೬೦೦ ಕಿಮೀ) ಹಿಮದಿಂದ ಆವೃತವಾದ ವಾಯುವ್ಯ ಮಾರ್ಗದ ಮೂಲಕ ತೆಗೆದುಕೊಂಡರು. == ವೃತ್ತಿ == === ಪುಸ್ತಕಗಳು === ಗ್ರಿಲ್ಸ್ ಅವರ ಮೊದಲ ಪುಸ್ತಕ ಫೇಸಿಂಗ್ ಅಪ್ (ಯುಕೆ)/ದಿ ಕಿಡ್ ಹೂ ಕ್ಲೈಂಬಡ್ ಎವರೆಸ್ಟ್ (ಯುಎಸ್). ಈ ಪುಸ್ತಕದಲ್ಲಿ ಅವರ ದಂಡಯಾತ್ರೆ ಮತ್ತು ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಸಾಧನೆಗಳನ್ನು ವಿವರಿಸಲಾಗಿದೆ. ಫೇಸಿಂಗ್ ದಿ ಪ್ರೊಝನ್ ಒಷಿಯನ್ ಇದು ಗ್ರಿಲ್ಸ್ ಅವರ ಎರಡನೇಯ ಪುಸ್ತಕ. ಬಾರ್ನ್ ಸರ್ವೈವರ್ ಅವರ ಮೂರನೆಯ ಪುಸ್ತಕ. ೨೦೧೧ ರಲ್ಲಿ ಗ್ರಿಲ್ಸ್ ಅವರ ಆತ್ಮಚರಿತ್ರೆ, ಮಡ್, ಸ್ವೆಟ್ ಅಂಡ್ ಟಿಯರ್ಸ್: ದಿ ಆಟೋಬಯೋಗ್ರಫಿ ಅನ್ನು ಬಿಡುಗಡೆ ಮಾಡಿದರು. ಮಿಷನ್ ಸರ್ವೈವಲ್: ಗೋಲ್ಡ್ ಆಫ್ ದಿ ಗಾಡ್ಸ್, ಮಿಷನ್ ಸರ್ವೈವಲ್: ವೇ ಆಫ್ ದಿ ವುಲ್ಫ್, ಮಿಷನ್ ಸರ್ವೈವಲ್: ಸ್ಯಾಂಡ್ಸ್ ಆಫ್ ದಿ ಸ್ಕಾರ್ಪಿಯನ್, ಮಿಷನ್ ಸರ್ವೈವಲ್: ಟ್ರ್ಯಾಕ್ಸ್ ಆಫ್ ದಿ ಟೈಗರ್ ಮತ್ತು ಮಿಷನ್ ಸರ್ವೈವಲ್: ಕ್ಲಾಸ್ ಕ್ರೊಕೊಡೆಲ್ ಎಂಬ ಮಕ್ಕಳ ಸಾಹಸ ಸರ್ವೈವಲ್‌ಯಾದ ಮಿಷನ್ ಸರ್ವೈವಲ್ ಸರಣಿ ಪುಸ್ತಕಗಳನ್ನು ಬರೆದರು. ೨೦೧೯ ರಲ್ಲಿ ಗ್ರಿಲ್ಸ್ ಸೋಲ್ ಫ್ಯೂಲ್ ಎಂಬ ಕ್ರಿಶ್ಚಿಯನ್ ಭಕ್ತಿಗೀತೆಯನ್ನು ಪ್ರಕಟಿಸಿದರು. ಅಕ್ಟೋಬರ್ ೨೦೨೧ ರಲ್ಲಿ ಗ್ರಿಲ್ಸ್ ಅವರು ನೆವರ್ ಗಿವ್ ಅಪ್ ಎಂಬ ಎರಡನೇ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದರು. ಏಪ್ರಿಲ್ ೨೦೨೩ ರಲ್ಲಿ ಗ್ರಿಲ್ಸ್ ಅವರು ಯು ದಿ ವರ್ಲ್ಡ್: ದಿ ಬೇರ್ ಗ್ರಿಲ್ಸ್ ಗೈಡ್ ಟು ನೆವರ್ ಗಿವಿಂಗ್ ಅಪ್ ಅನ್ನು ಬಿಡುಗಡೆ ಮಾಡಿದರು. ಸೆಪ್ಟೆಂಬರ್ ೨೦೨೩ ರಲ್ಲಿ ಗ್ರಿಲ್ಸ್ ಅವರು ಹೌ ಟು ಬಿ ಎ ಸ್ಕೌಟ್ ಅನ್ನು ಬಿಡುಗಡೆ ಮಾಡಿದರು. == ದೂರದರ್ಶನ == ೨೦೦೯ ರ ಜನವರಿಯಿಂದ ಯು.ಎಸ್‌ನಲ್ಲಿ ಪ್ರಸಾರವಾದ ಪೋಸ್ಟ್‌ನ ಟ್ರಯಲ್ ಮಿಕ್ಸ್ ಕ್ರಂಚ್ ಸೀರಿಯಲ್‌ಗಾಗಿ ಗ್ರಿಲ್ಸ್ ಎರಡು ಜಾಹೀರಾತುಗಳನ್ನು ರೆಕಾರ್ಡ್ ಮಾಡಿದರು. ೨೦೧೩ ರಲ್ಲಿ ಗ್ರಿಲ್ಸ್ ಅವರು ಏರ್ ನ್ಯೂಜಿಲೆಂಡ್‌ಗಾಗಿ ಏರ್‌ಲೈನ್ ಸುರಕ್ಷತಾ ವೀಡಿಯೊದಲ್ಲಿ ಕಾಣಿಸಿಕೊಂಡರು. ೨೦೧೪ ರಲ್ಲಿ ಪಿಯರ್ಸ್ ಮೋರ್ಗಾನ್ ಅವರ ಜೀವನ ಕಥೆಗಳಲ್ಲಿ ಗ್ರಿಲ್ಸ್ ಅವರು ಕಾಣಿಸಿಕೊಂಡರು. === ಲೀಜನ್ ಎಸ್ಕೇಪ್ === ಗ್ರಿಲ್ಸ್ ಅವರು ೨೦೦೫ ರಲ್ಲಿ ಎಸ್ಕೇಪ್ ಟು ದಿ ಲೀಜನ್ ಎಂಬ ಟಿವಿ ಕಾರ್ಯಕ್ರಮವನ್ನು ಚಿತ್ರೀಕರಿಸಿದರು. ಈ ಕಾರ್ಯಕ್ರಮವನ್ನು ಮೊದಲು ಯುಕೆಯಲ್ಲಿ ಚಾನೆಲ್ ೪ ಮತ್ತು ಯುಎಸ್‌ನಲ್ಲಿ ಮಿಲಿಟರಿ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಯಿತು. === ಬಾರ್ನ್ ಸರ್ವೈವರ್/ಮ್ಯಾನ್ ವರ್ಸಸ್ ವೈಲ್ಡ್ === ಗ್ರಿಲ್ಸ್ ಅವರು ಬ್ರಿಟಿಷ್ ಚಾನೆಲ್ ೪ ಗಾಗಿ ಬಾರ್ನ್ ಸರ್ವೈವರ್ ಎಂಬ ಶೀರ್ಷಿಕೆಯ ಸರಣಿಯನ್ನು ಆಯೋಜಿಸುತ್ತಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಎಂಬ ಹೆಸರಿನಲ್ಲಿ ಪ್ರಸಾರ ಮಾಡುತ್ತಾರೆ. ಯುರೋಪ್, ಏಷ್ಯಾದಲ್ಲಿ ಡಿಸ್ಕವರಿ ಚಾನೆಲ್‌ನಲ್ಲಿ ಅಲ್ಟಿಮೇಟ್ ಸರ್ವೈವಲ್ ಎಂಬ ಹೆಸರಿನಲ್ಲಿ ಪ್ರಸಾರ ಮಾಡಿದರು. ೨೦೦೬ ರಲ್ಲಿ ಮ್ಯಾನ್ ವರ್ಸಸ್ ವೈಲ್ಡ್ ಅನ್ನು ಪ್ರಾರಂಭಿಸಲಾಯಿತು. === ಬೇರ್ಸ್ ವೈಲ್ಡ್ ವೀಕೆಂಡ್ === ೨೦೧೧ ರ ಕ್ರಿಸ್ಮಸ್ ರಜಾದಿನಗಳಲ್ಲಿ ಗ್ರಿಲ್ಸ್ ಅವರು ಯುಕೆಯಲ್ಲಿ ಚಾನೆಲ್ ೪ನಲ್ಲಿ ಬೇರ್ಸ್ ವೈಲ್ಡ್ ವೀಕೆಂಡ್ ಎಂಬ ಶೀರ್ಷಿಕೆಯಡಿಯಲ್ಲಿ ಎರಡು ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡಿದರು. === ಗೆಟ್ ಔಟ್ ಅಲೈವ್ === ಗೆಟ್ ಔಟ್ ಅಲೈವ್ ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಿಸಲಾದ ರಿಯಾಲಿಟಿ ಸ್ಪರ್ಧೆಯ ಸರಣಿಯಾಗಿದೆ. ಇದು ೮ ಜುಲೈ ೨೦೧೩ ರಂದು ಎನ್‌ಬಿಸಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು. === ದಿ ಐಲ್ಯಾಂಡ್ === ೫ ಮೇ ೨೦೧೪ ರಂದು ದಿ ಐಲ್ಯಾಂಡ್ ಅನ್ನು ಮೊದಲು ಚಾನೆಲ್ ೪ ನಲ್ಲಿ ಪ್ರದರ್ಶಿಸಲಾಯಿತು. ಇದು ೨೫ ಮೇ ೨೦೧೫ ರಂದು ಎನ್‌ಬಿಸಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಅಮೇರಿಕನ್ ಆವೃತ್ತಿಯನ್ನು ಸಹ ಮಾಡಲಾಯಿತು. ಇದನ್ನು ೨೫ ಮೇ ೨೦೨೫ ರಂದು ಎನ್‌ಬಿಸಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು. === ಬೇರ್ ಗ್ರಿಲ್ಸ್ ಸರ್ವೈವಲ್ ಸ್ಕೂಲ್ === ೨೦೧೬ ರಲ್ಲಿ ಗ್ರಿಲ್ಸ್ ಅವರು ಬೇರ್ ಗ್ರಿಲ್ಸ್ ಸರ್ವೈವಲ್ ಸ್ಕೂಲ್ ಎಂಬ ಸಿಐಟಿವಿ ಸರಣಿಯನ್ನು ಪ್ರಸ್ತುತಪಡಿಸಿದರು. ೨೦೧೫ ಆಗಸ್ಟ್‌ರಲ್ಲಿ ಚಿತ್ರೀಕರಣವು ಪ್ರಾರಂಭವಾಯಿತು. ಸರಣಿಯು ೧೦ ಜನವರಿ ೨೦೧೬ ರಂದು ಪ್ರಸಾರವಾಯಿತು. ಎರಡನೇ ಸರಣಿಯು ೭ ಜನವರಿ ೨೦೧೭ ರಂದು ಪ್ರಾರಂಭವಾಯಿತು. == ಸ್ಕೌಟಿಂಗ್‌ ಹುದ್ದೆಗಳು == === ವಿಶ್ವ ಸ್ಕೌಟಿಂಗ್‌ನ ಮುಖ್ಯ ರಾಯಭಾರಿ ಹುದ್ದೆ === ೧೬ ನವೆಂಬರ್ ೨೦೧೮ ರಂದು ಸ್ಕೌಟ್ ಚಳುವಳಿಯ ವಿಶ್ವ ಸಂಸ್ಥೆಯು ತನ್ನ ಮೊದಲ ಮುಖ್ಯ ರಾಯಭಾರಿಯಾಗಿ ಬೇರ್ ಗ್ರಿಲ್ಸ್ ಅವರನ್ನು ನೇಮಕ ಮಾಡಿತು. ೨೪ ನೇ ವಿಶ್ವ ಸ್ಕೌಟ್ ಜಾಂಬೋರಿಯಲ್ಲಿ ರಾಯಭಾರಿಯಾಗಿದ್ದರು. === ಸ್ಕೌಟ್ ಸಂಘದ ಮುಖ್ಯ ಸ್ಕೌಟ್ === ೧೭ ಮೇ ೨೦೦೯ ರಂದು ಸ್ಕೌಟ್ ಅಸೋಸಿಯೇಷನ್ ​​ಜುಲೈ ೨೦೦೯ ರಲ್ಲಿ ಪೀಟರ್ ಡಂಕನ್ ಅವರ ಐದು ವರ್ಷಗಳ ಅವಧಿಯ ಅಂತ್ಯದ ನಂತರ ಗ್ರಿಲ್ಸ್ ಅವರನ್ನು ಮುಖ್ಯ ಸ್ಕೌಟ್ ಆಗಿ ನೇಮಿಸಿದರು. === ಯುನೈಟೆಡ್ ೨೪ರಲ್ಲಿ ರಾಯಭಾರಿ === ೨೯ ಮಾರ್ಚ್ ೨೦೨೩ ರಂದು ಬೇರ್ ಗ್ರಿಲ್ಸ್ ಯುನೈಟೆಡ್ ೨೪ ಪ್ಲಾಟ್‌ಫಾರ್ಮ್‌ಗೆ ರಾಯಭಾರಿಯಾಗಿದ್ದರು. == ಉಲ್ಲೇಖಗಳು ==